

3rd December 2025

ಹುಣಸಗಿ - ಚಾರಿತ್ರಿಕ ಸಿನೆಮಾಗಳು ಜನತೆಯ ಮನೋಧರ್ಮ ಬದಲಿಸಬಲ್ಲವು ಎಂದು ರಾಜ್ಯದ ಗ್ರಂಥಾಲಯಗಳ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾದ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಕರೆ ನೀಡಿದರು.ಅವರು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಇತ್ತೀಚೆಗೆ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ *ಸಮುದಾಯದತ್ತ ಸಿನೆಮಾ... ಅಡಿಯಲ್ಲಿ ನಾಡೋಜ ಬರಗೂರರ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನದ *ಸ್ವಪ್ನ ಮಂಟಪ* ಚಲನಚಿತ್ರ ಪ್ರದರ್ಶನದ ಆಶಯ ನುಡಿಯಲ್ಲಿ ಚಾರಿತ್ರಿಕ ಸಿನೆಮಾಗಳು ಕುರಿತು ಮಾತನಾಡಿದರು. ಮುಂದುವರಿದು ಅವರು ಪ್ರೊ.ಬರಗೂರರ ಸಾಹಿತ್ಯ,ಅವರ ಜನಮುಖಿ ಆಶಯಗಳು,ಅವರ ಸಮಾಜಮುಖಿ ಚಲನಚಿತ್ರಗಳು ಹಾಗೂ ಈ ಸ್ವಪ್ನ ಮಂಟಪ ಚಲನಚಿತ್ರದ ಚಾರಿತ್ರಿಕ ಹಾಗೂ ವರ್ತಮಾನದ ಸಮೀಕರಣದ ಬಗ್ಗೆ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಮೃತ ಅರಳಗುಂಡಿಗಿ,ಶಿವಾಜಿ ಗುಂತಾ,ಅನುಭಾವಿಕ ಕವಿ ಸಾಹೇಬ ಗೌಡ ಬಿರಾದಾರ, ಲೇಖಕ ವಿದ್ಯಾ ಕುಮಾರ್ ಬಡಿಗೇರ ಮುಂತಾದ ಅನೇಕ ಗಣ್ಯರು, ಉಪನ್ಯಾಸಕ ಮಿತ್ರರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸ್ವರ್ಣ ಮಂಟಪ ಸಿನೆಮಾ ಇದು ಯಾದಗಿರಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಇಂದು ಸಮಾರೋಪ ಸಮಾರಂಭ ನಡೆಸಲಾಯಿತು. ಪ್ರೌಡಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸಂಗಮ್ಮ ನಾಗಾವಿ ಅವರು ಸಮಾರೋಪ ನುಡಿಯಲ್ಲಿ ತಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದಕ್ಕೆ ಪ್ರೊ ಬರಗೂರರಿಗೆ ಹಾಗೂ ಯಾದಗಿರಿ ಜಿಲ್ಲೆಯ ಹಿರಿಯ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರಿಗೆ ಕೃತಜ್ಞತೆಗಳು ಸಲ್ಲಿಸಿದರು. ಇದು ನಾಡಿನಾದ್ಯಂತ ಪ್ರದರ್ಶನಗೊಂಡು ಜನಮನ ತಲುಪಲಿ ಎಂದು ಶುಭ ಕೋರಿದರು. ಶ್ರೀ ಹೊನ್ಕಲ್
ಪ್ರತಿಷ್ಠಾನದ ಸದಸ್ಯರಾದ ಶ್ರೀ ನೀಲಕಂಠ ಹೊನ್ಕಲ್ ಅವರು ಪ್ರೊ.ಬರಗೂರರ ಬದುಕು ಬರಹ ಪರಿಚಯಿಸಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ಸಣ್ಣೆಕೆಪ್ಪ ಪುಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿ ಚಲನಚಿತ್ರ ಪ್ರದರ್ಶನಕ್ಕೆ ಎರ್ಪಾಡು ಮಾಡಿದರು. ಹುಣಸಗಿ ಕಸಾಪ ಅಧ್ಯಕ್ಷರಾದ ವೆಂಕಟಗಿರಿ ದೇಶಪಾಂಡೆ ಹಾಗೂ ಮಾಜಿ ಗೌರವ ಕಾರ್ಯದರ್ಶಿ ನಾಗನಗೌಡ ಪಾಟೀಲ ಮುಂತಾದ ಗಣ್ಯರು ನೂರಾರು ವಿದ್ಯಾರ್ಥಿಗಳ ಜೊತೆ ಚಲನಚಿತ್ರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
undefined

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025